2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ನೊಂದಾಯಿಸಲು ನಿಗದಿತ ಸಮಯ ಜನವರಿ 03, 2026 ದಿನಾಂಕದಿಂದ ಶುರುವಾಗಿದೆ ಮತ್ತು ಮಾರ್ಚ್ 31, 2026 ರ ವರೆಗೂ ಸಮಯವಿರುತ್ತದೆ. ಅರ್ಜಿ ಸಲ್ಲಿಸಬೇಕೆಂದು ಇರುವವರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ “ಸೇವಾ ಸಿಂಧು ಸೇವಾ ಸಿಂಧು” ಪೋರ್ಟಲ್ ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸೋಕೆ ಬೇಕಾದ ಅರ್ಹತೆಗಳು.
- ಅರ್ಜಿ ಸಲ್ಲಿಸೋಕೆ ಬೇಕಾದ ಅರ್ಹತೆಗಳು
- ಕನಿಷ್ಠ ಮೂರು ತಿಂಗಳಗಳ ಕಾಲ ಸಹಕಾರ ಸಂಘಗಳ ಸದಸ್ಯರಾಗಿರಬೇಕು.
- ಆಧಾರ್ ಕಾರ್ಡ್
- ರೇಷನ್ ಕಾರ್ಡ್, ಇನ್ನಿತರ.
ನೋಂದಣಿ ವಿವರಗಳು.
- ನೋಂದಣಿ ಆರಂಭ: ಜನವರಿ 03, 2026.
- ನೊಂದಣಿ ಕೊನೆಯ ದಿನಾಂಕ: ಮಾರ್ಚ್ 31, 2026.
- ಚಿಕಿತ್ಸೆ ಅವಧಿ: ಏಪ್ರಿಲ್ 01, 2026 ರಿಂದ ಮಾರ್ಚ್ 31, 2027.
ಬರಿಸಬೇಕಾದ ವಾರ್ಷಿಕ ಮೊತ್ತ.
- ಗ್ರಾಮೀಣ ಪ್ರದೇಶದ ಒಟ್ಟು ನಾಲ್ವರ ಸದಸ್ಯರ ಕುಟುಂಬಕ್ಕೆ ವಾರ್ಷಿಕ 500ರೂಪಾಯಿಗಳು ಮತ್ತು ಹೆಚ್ಚುವರಿ ಸದಸ್ಯರಿಗೆ ತಲಾ 100 ರೂಪಾಯಿಗಳು.
- ನಗರ ಪ್ರದೇಶದ ಒಟ್ಟು ನಾಲ್ವರ ಸದಸ್ಯರ ಕುಟುಂಬಕ್ಕೆ ವಾರ್ಷಿಕವಾಗಿ ಸಾವಿರ ರೂಪಾಯಿಗಳು ಮತ್ತು ಹೆಚ್ಚುವರಿ ಸದಸ್ಯರಿಗೆ ತಲಾ 200 ರೂಪಾಯಿಗಳಂತೆ ವಾರ್ಷಿಕವಾಗಿ ಭರಿಸಬೇಕು.
- ಎಸ್ಸಿ / ಎಸ್ಟಿ ಕುಟುಂಬಕ್ಕೆ ಸರ್ಕಾರವೇ ಅವರ ಮೊತ್ತವನ್ನು ಭರಿಸುತ್ತದೆ.
ಏಪ್ರಿಲ್ 01 ರಿಂದ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಣೆ ಪ್ರಾರಂಭವಾಗುತ್ತದೆ.