ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ 572 ಆಫೀಸ್ ಅಟೆಂಡರ್ ಹುದ್ದೆಗೆ ನೇಮಕಾತಿ ಮಾಡಲು ಅರ್ಜಿಯನ್ನು ಹೊರಡಿಸಿದ್ದಾರೆ. ಈ ಹುದ್ದೆಯಲ್ಲಿ ಸುಮಾರು 26,000 ದಿಂದ 46,000 ವರೆಗೆ ಸಂಬಳ ಇರುತ್ತೆ. ಇದಕ್ಕೆ ಬೇಕಾದ ಎಲ್ಲ ಮಾಹಿತಿಗಳು ಈ ಕೆಳಗೆ ನೀಡಿದೆ. ದಯವಿಟ್ಟು ಎಲ್ಲರೂ ಕುಲಂಕುಶವಾಗಿ ಪರಿಶೀಲಿಸಿ ಅರ್ಜಿ ಹಾಕಿ ಇದರ ಸದುಪಯೋಗ ಪಡಿಸಿಕೊಳ್ಳಿ.
ಅರ್ಹತೆಗಳು.
- ಎಸ್ ಎಲ್ ಸಿ ಪಾಸ್ ಆಗಿರಬೇಕು.
- ವಯಸ್ಸು 18 ರಿಂದ 25 ರವರೆಗೆ ಇರಬೇಕು.
ಈ ಹುದ್ದೆಗೆ 120 ಅಂಕಗಳ ಆನ್ಲೈನ್ ಟೆಸ್ಟ್ ಇರುತ್ತದೆ.
ಅರ್ಜಿ ಶುಲ್ಕದ ಬಗ್ಗೆ ಮಾಹಿತಿ.
- SC / ST ಮತ್ತು PwBD – ₹50 + 18% GST
- GEN / OBC / EWS – ₹450 + 18% GST
ಅರ್ಜಿ ಹಾಕಲು ಪ್ರಮುಖ ದಿನಾಂಕಗಳು.
> ಅರ್ಜಿ ಹಾಕಲು ಜನವರಿ 15 ರಿಂದ ಫೆಬ್ರುವರಿ 04 – 2026 ರ ವರೆಗೆ.
> ಶುಲ್ಕ ಪಾವತಿಸಲು ಜನವರಿ 15 ರಿಂದ ಫೆಬ್ರುವರಿ 04 – 2026 ರ ವರೆಗೆ.
> ಪರೀಕ್ಷಾ ದಿನಾಂಕ ಫೆಬ್ರುವರಿ 28 ಮತ್ತು ಮಾರ್ಚ್ 01 ನೇ ತಾರೀಕಿಗೆ.