ಏನಿದು PM Vidyalakshmi ಯೋಜನೆ?
ದೇಶದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಈ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 10 ಲಕ್ಷವರೆಗೂ ಎಜುಕೇಶನ್ ಲೋನ್ ದೊರೆಯುತ್ತದೆ. ಯಾವುದೇ ಆಸ್ತಿ ಪತ್ರ ಹಣ ಇಡದೆ ಮತ್ತು ಯಾವುದೇ ಶೂರಿಟಿ ಇಲ್ಲದೆ ಸರ್ಕಾರದಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ಆಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ದೇಶದಲ್ಲಿರುವ ಟಾಪ್ 850 ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ನಿಮ್ಮ ದಾಖಲಾತಿ ಇದ್ದರೆ ಅಥವಾ ನಿಮ್ಮ ಅಡ್ಮಿಶನ್ ಇದ್ದರೆ ಈ ಯೋಜನೆ ಅಡಿಯಲ್ಲಿ ಸುಲಭವಾಗಿ ಸಾಲ ಪಡೆಯಬಹುದು.
ಸಾಲದ ಪ್ರಮಾಣ ಮತ್ತು ಬಡ್ಡಿದರ ರಿಯಾಯಿತಿಗಳು.
> ಈ ಯೋಜನೆಯ ಗರಿಷ್ಠ ಸಾಲದ ಮೊತ್ತ 10 ಲಕ್ಷ.
> ಈ ಸಾಲದ ಬಡ್ಡಿ ದರ ಬ್ಯಾಂಕಿನ IBLR + o.5% ಇರುತ್ತದೆ
> ಕುಟುಂಬದ ವಾರ್ಷಿಕ ಆದಾಯದ ಮಟ್ಟ 8 ಲಕ್ಷಕ್ಕಿಂತ ಕಡಿಮೆ ಇದ್ದರೆ ನಿಮಗೆ ದೊರೆಯುವ 10 ಲಕ್ಷ ರೂ ಸಾಲದ ಮೇಲೆ 3% ಬಡ್ಡಿ ಇರುತ್ತದೆ.
> ಕುಟುಂಬದ ಆದಾಯ 4.5 ಲಕ್ಷ ರೂ ಗಳಿಗಿಂತ ಕಡಿಮೆ ಇದ್ದಲ್ಲಿ ಪೂರ್ಣ ಪ್ರಮಾಣದ ಬಡ್ಡಿ ವಿನಾಯಿತಿ ದೊರೆಯುತ್ತದೆ.
ಅರ್ಹತೆಗಳು.
- ಯೋಜನೆಯ ಲಾಭ ಪಡೆಯಲು ವಿದ್ಯಾರ್ಥಿಗಳು ದೇಶದ ಟಾಪ್ 850 ಶಿಕ್ಷಣ ಸಂಸ್ಥೆಗಳಲ್ಲಿ ಸೀಟ್ ಪಡೆದುಕೊಂಡಿರಬೇಕು.
- ವಿದ್ಯಾಭ್ಯಾಸದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಬಾರದು.
- ಮೆಡಿಕಲ್ ಎಮರ್ಜೆನ್ಸಿ ಯನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಕಾಲೇಜಿನಿಂದ ವಜಾ ಆಗಿರಬಾರದು.
ಅಗತ್ಯವಿರುವ ಪ್ರಮುಖ ದಾಖಲೆಗಳು.
- ಆಧಾರ್ ಕಾರ್ಡ್.
- ಕುಟುಂಬದ ಆದಾಯ ಪ್ರಮಾಣ ಪತ್ರ.
- ಪ್ಯಾನ್ ಕಾರ್ಡ್.
- ಹಿಂದಿನ ತರಗತಿಯಲ್ಲಿ ಪಡೆದುಕೊಂಡಿರುವ ಅಂಕಪಟ್ಟಿಗಳು.
- ಪ್ರವೇಶ ಪರೀಕ್ಷೆಯ ರಿಸಲ್ಟ್ ಶೀಟ್.
- ಕಾಲೇಜಿನ ಅಡ್ಮಿಷನ್ ರಶೀದಿ.
ಸಾಲದ ಮರುಪಾವತಿ ಹೇಗೆ?
> ಸಾಲ ಮಂಜೂರಾದ ದಿನದಿಂದ ಮುಗಿದ ನಂತರ ಒಂದು ವರ್ಷದ ಒಳಗಿನ ಅವಧಿಯಲ್ಲಿ ಸಾಲ ಮರುಪಾವತಿ ಅಗತ್ಯವಿಲ್ಲ.
> ಒಂದು ವರ್ಷ ಆದ ನಂತರ 15 ವರ್ಷಗಳ ಕಾಲಾವಕಾಶದಲ್ಲಿ ಸಾಲ ಮರುಪಾವತಿಗೆ ಅವಕಾಶವಿರುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಅರ್ಹ ಅಭ್ಯರ್ಥಿಗಳು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ವಿದ್ಯಾಲಕ್ಷ್ಮಿ ಪೋರ್ಟಲ್ ಗೆ ಭೇಟಿ ನೀಡಿ ಅಗತ್ಯವಿರುವ ಪ್ರಮುಖ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.