ರಾಜ್ಯದ ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರ ಭವಿಷ್ಯ ಭದ್ರತೆಗೆ ಕರ್ನಾಟಕ ಸರ್ಕಾರ ಮಹತ್ವದ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ವೃದ್ಧಾಪ್ಯದಲ್ಲಿ ಆರ್ಥಿಕ ಆಸರೆ, ಅಪಘಾತ ಅಥವಾ ಮರಣದ ಸಂದರ್ಭದಲ್ಲಿ ಕುಟುಂಬದ ರಕ್ಷಣೆಯ ಉದ್ದೇಶದಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮಾಸಿಕ ಪಿಂಚಣಿ ಸೇರಿದಂತೆ ಹಲವು ನೆರವುಗಳನ್ನು ಒದಗಿಸುತ್ತಿದೆ. ಈ ಯೋಜನೆಯ ಮೂಲಕ ಸಾವಿರಾರು ಕಾರ್ಮಿಕ ಕುಟುಂಬಗಳಿಗೆ ನೇರ ಪ್ರಯೋಜನ ಸಿಗುತ್ತಿದೆ.
ಈ ಯೋಜನೆಯ ಪ್ರಮುಖ ಸೌಲಭ್ಯಗಳು, ಅರ್ಹತೆ, ನೋಂದಣಿ ವಿಧಾನ ಮತ್ತು ಅಗತ್ಯ ದಾಖಲೆಗಳ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.
ಕಟ್ಟಡ ಕಾರ್ಮಿಕರ ಪಿಂಚಣಿ ಯೋಜನೆ ಎಂದರೇನು?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರಿಗೆ ಸರ್ಕಾರದಿಂದ ವೃದ್ಧಾಪ್ಯ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಸೌಲಭ್ಯಗಳನ್ನು ನೀಡಲಾಗುತ್ತದೆ. 60 ವರ್ಷ ವಯಸ್ಸು ಪೂರೈಸಿದ ನಂತರ ಕಾರ್ಮಿಕರಿಗೆ ಪ್ರತಿದಿನದ ಜೀವನ ನಿರ್ವಹಣೆಗೆ ಮಾಸಿಕ ಪಿಂಚಣಿ ಸಿಗುತ್ತದೆ. ಕಾರ್ಮಿಕರ ಅಕಾಲಿಕ ಮರಣದ ಸಂದರ್ಭದಲ್ಲಿ ಅವರ ಪತ್ನಿ ಅಥವಾ ಅವಲಂಬಿತರಿಗೆ ಕುಟುಂಬ ಪಿಂಚಣಿ ದೊರೆಯುತ್ತದೆ.
ಪಿಂಚಣಿ ಮೊತ್ತ ಎಷ್ಟು ಸಿಗುತ್ತದೆ?
o1. ವೃದ್ಧಾಪ್ಯ ಪಿಂಚಣಿ
- 60 ವರ್ಷ ಪೂರೈಸಿದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪ್ರತಿ ತಿಂಗಳು ₹3,000 ಪಿಂಚಣಿ.
02. ಅಂಗವಿಕಲ ಪಿಂಚಣಿ
- ಅಪಘಾತ ಅಥವಾ ಕಾಯಿಲೆಯಿಂದ ಶಾಶ್ವತ / ಭಾಗಶಃ ಅಂಗವಿಕಲರಾದಲ್ಲಿ ಮಾಸಿಕ ₹2,000 ಪಿಂಚಣಿ.
- ಜೊತೆಗೆ ಅಂಗವಿಕಲತೆಯ ಪ್ರಮಾಣದ ಆಧಾರದಲ್ಲಿ ₹2 ಲಕ್ಷದವರೆಗೆ ಅನುಗ್ರಹ ಧನ ನೀಡಲಾಗುವುದು.
03. ಕುಟುಂಬ ಪಿಂಚಣಿ
- ಕಾರ್ಮಿಕರ ಮರಣದ ನಂತರ ಪತ್ನಿ ಅಥವಾ ಪತಿಗೆ ಮಾಸಿಕವಾಗಿ ₹1,500 ಪಿಂಚಣಿ.
04. ಮರಣೋತ್ತರ ನೆರವು
- ಅಂತ್ಯಕ್ರಿಯೆ ವೆಚ್ಚಕ್ಕೆ ₹4,000 ಸಿಗುತ್ತದೆ.
- ಅನುಗ್ರಹ ಸಹಾಯಧನವಾಗಿ ₹71,000 ವರೆಗೆ ದೊರೆಯುತ್ತದೆ.
- ನೋಂದಾಯಿಸದ ಕಾರ್ಮಿಕರ ಮರಣದ ಸಂದರ್ಭದಲ್ಲಿ ಅವಲಂಬಿತರಿಗೆ ಒಮ್ಮೆ ₹50,000 ವರೆಗೆ ನೆರವು ನೀಡಲಾಗುವುದು.
ಇನ್ನೂ ಹಲವು ಸೌಲಭ್ಯಗಳು.
ಈ ಮಂಡಳಿ ಪಿಂಚಣಿಯ ಜೊತೆಗೆ ಕೆಳಗಿನ ಪ್ರಮುಖ ಕಲ್ಯಾಣ ಯೋಜನೆಗಳನ್ನೂ ನೀಡುತ್ತಿದೆ:
> ಮಕ್ಕಳ ಶಿಕ್ಷಣ ಸಹಾಯಧನ
- ಕಾರ್ಮಿಕರ ಮಕ್ಕಳಿಗೆ ವರ್ಷಕ್ಕೆ ₹2,000 ರಿಂದ ₹30,000 ವರೆಗೆ ದೊರೆಯುತ್ತದೆ.
> ಹೆರಿಗೆ ಸಹಾಯ (ತಾಯಿ ಲಕ್ಷ್ಮೀ ಯೋಜನೆ)
- ಮಹಿಳಾ ಕಾರ್ಮಿಕರಿಗೆ ಮೊದಲ ಎರಡು ಮಕ್ಕಳಿಗೆ ತಲಾ ₹50,000.
> ಮದುವೆ ನೆರವು
- ಕಾರ್ಮಿಕರ ಸ್ವಂತ ಮದುವೆಗೆ ಅಥವಾ ಮಕ್ಕಳ ವಿವಾಹಕ್ಕೆ ₹50,000 ಸಹಾಯಧನ.
> ಉಪಕರಣಗಳ ಸಹಾಯ
- ಕೆಲಸಕ್ಕೆ ಅಗತ್ಯವಾದ ಟೂಲ್ಕಿಟ್ ಖರೀದಿಗೆ ₹20,000 ವರೆಗೆ ಧನಸಹಾಯ.
ಯಾರು ಈ ಯೋಜನೆಗೆ ಅರ್ಹರು?
ಈ ಯೋಜನೆಯ ಸೌಲಭ್ಯ ಪಡೆಯಲು ಕೆಳಗಿನ ಅಂಶಗಳು ಕಡ್ಡಾಯ:
- ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಕಟ್ಟಡ ಮತ್ತು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.
- ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿರಬೇಕು.
- ವರ್ಷಕ್ಕೆ ಕನಿಷ್ಠ 90 ದಿನ ಕೆಲಸ ಮಾಡಿರಬೇಕು.
- ಪಿಂಚಣಿಗೆ ಅರ್ಜಿ ಸಲ್ಲಿಸುವ ವೇಳೆಗೆ 60 ವರ್ಷ ವಯಸ್ಸು ಪೂರೈಸಿರಬೇಕು.
- 60 ವರ್ಷಕ್ಕೂ ಮುನ್ನ ಕನಿಷ್ಠ 3 ವರ್ಷ ಮಂಡಳಿಯ ಸದಸ್ಯರಾಗಿರಬೇಕು.
ನೋಂದಣಿ ಪ್ರಕ್ರಿಯೆ ಹೇಗೆ?
ಕಟ್ಟಡ ಕಾರ್ಮಿಕರು ಸಂಪೂರ್ಣವಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಬಹುದು.
ಹಂತಗಳು:
- ಅಧಿಕೃತ ವೆಬ್ಸೈಟ್ 👉 karbwwb.karnataka.gov.in ಗೆ ಭೇಟಿ ನೀಡಿ.
- Register ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- “Register as New Construction Worker” ಆಯ್ಕೆ ಮಾಡಿಕೊಳ್ಳಿ.
- ಆಧಾರ್ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಯಿಂದ OTP ದೃಢೀಕರಣ ಮಾಡಿಕೊಳ್ಳಿ.
- ನೋಂದಣಿ ಪ್ರಕ್ರಿಯೆಗೆ ಕೇಳಲಾದ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- Final Submit ಕ್ಲಿಕ್ ಮಾಡಿ.
ಸದಸ್ಯತ್ವ ನವೀಕರಣ ಹೇಗೆ ಮಾಡುವುದು?
- ವೆಬ್ಸೈಟ್ಗೆ ಲಾಗಿನ್ ಆಗಿ
- ಡ್ಯಾಶ್ಬೋರ್ಡ್ನಲ್ಲಿ Renewal ಆಯ್ಕೆ ಮಾಡಿ
- ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- Submit ಮಾಡಿ ನವೀಕರಣ ಪೂರ್ಣಗೊಳಿಸಿ
> ಗಮನಿಸಿ: ನೋಂದಣಿಯನ್ನು ಪ್ರತಿ 3 ವರ್ಷಕ್ಕೊಮ್ಮೆ ನವೀಕರಿಸುವುದು ಕಡ್ಡಾಯ.
ಅಗತ್ಯ ದಾಖಲೆಗಳು (Documents).
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ಬುಕ್
- ಇತ್ತೀಚಿನ ಭಾವಚಿತ್ರ
- ಮರಣ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ವಾರಸುದಾರರ ಪ್ರಮಾಣ ಪತ್ರ
- ಜಾತಿ / ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
ಸಹಾಯವಾಣಿ ಮಾಹಿತಿ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಕಾರ್ಮಿಕ ಭವನ, ಡೈರಿ ಸರ್ಕಲ್,
ಬನ್ನೇರುಘಟ್ಟ ರಸ್ತೆ, ಬೆಂಗಳೂರು – 560029
ದೂರವಾಣಿ: 080-29753078
ಕೊನೆಯ ಮಾತು
ಕಟ್ಟಡ ಕಾರ್ಮಿಕರ ಶ್ರಮಕ್ಕೆ ಭದ್ರ ಭವಿಷ್ಯ ಒದಗಿಸುವ ಈ ಯೋಜನೆ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ. ನೀವು ಅಥವಾ ನಿಮ್ಮ ಕುಟುಂಬದವರು ಕಟ್ಟಡ ಕಾರ್ಮಿಕರಾಗಿದ್ದರೆ, ಈ ಯೋಜನೆಯ ಸೌಲಭ್ಯಗಳನ್ನು ತಪ್ಪದೇ ಬಳಸಿಕೊಳ್ಳಿ.