ಭಾರತೀಯ ರೈಲ್ವೆ ನೇಮಕಾತಿ 2026: 22 ಸಾವಿರಕ್ಕೂ ಹೆಚ್ಚು Group-D ಹುದ್ದೆಗಳು – ಅರ್ಹರಿಗೆ ದೊಡ್ಡ ಅವಕಾಶ.

ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಬೇಕೆಂದು ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ದೇಶದಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ 22,000ಕ್ಕೂ ಹೆಚ್ಚು ಲೆವೆಲ್-1 (Group-D) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರೈಲ್ವೆ ನೇಮಕಾತಿ ಮಂಡಳಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಈ ನೇಮಕಾತಿ ಪ್ರಕ್ರಿಯೆ RRB ಕೇಂದ್ರಿತ ಉದ್ಯೋಗ ಅಧಿಸೂಚನೆ (CEN No. 09/2025) ಅಡಿಯಲ್ಲಿ ನಡೆಯಲಿದ್ದು, ಯುವಕರಿಗೆ ಸ್ಥಿರ ಮತ್ತು ಗೌರವಯುತ ಸರ್ಕಾರಿ ಸೇವೆಗೆ ಕಾಲಿಡುವ ಮಹತ್ವದ ಅವಕಾಶವಾಗಿದೆ.


ಈ ನೇಮಕಾತಿಯ ಮೂಲಕ ರೈಲ್ವೆ ಇಲಾಖೆಯಲ್ಲಿ ಕೆಳಗಿನಂತಹ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ:

  • ಟ್ರ್ಯಾಕ್ ಮೆಂಟೇನರ್
  • ಹೆಲ್ಪರ್ / ಅಸಿಸ್ಟೆಂಟ್
  • ಪಾಯಿಂಟ್ಸ್‌ಮನ್
  • ಇತರೆ ಲೆವೆಲ್-1 ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳು

> ಒಟ್ಟು ಹುದ್ದೆಗಳು: ಸುಮಾರು 22,000ಕ್ಕೂ ಹೆಚ್ಚು
> ವೇತನ ಹಂತ: 7ನೇ ವೇತನ ಆಯೋಗದ ಲೆವೆಲ್-1


ಅಭ್ಯರ್ಥಿಗಳು ಈ ದಿನಾಂಕಗಳನ್ನು ತಪ್ಪದೇ ಗಮನದಲ್ಲಿಟ್ಟುಕೊಳ್ಳಬೇಕು:

  • ಅಧಿಸೂಚನೆ ಪ್ರಕಟಣೆ: ಡಿಸೆಂಬರ್ 2025 ಅಂತ್ಯ
  • ಆನ್‌ಲೈನ್ ಅರ್ಜಿ ಆರಂಭ: ಜನವರಿ 31, 2026 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 02, 2026
  • CBT ಪರೀಕ್ಷೆ: ಮೇ / ಜೂನ್ 2026 (ಅಂದಾಜು)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್ (SSLC / Matriculation).
    ಅಥವಾ
  • ಐಟಿಐ (NCVT / SCVT) ಪ್ರಮಾಣಪತ್ರ ಇರಬೇಕು. 

ಕೆಲ ತಾಂತ್ರಿಕ ಹುದ್ದೆಗಳಿಗೆ ಐಟಿಐ ಕಡ್ಡಾಯವಾಗಿರಬಹುದು.


ರೈಲ್ವೆ ಕೆಲಸವು ದೈಹಿಕ ಶ್ರಮವನ್ನು ಒಳಗೊಂಡಿರುವುದರಿಂದ:

  • ದೃಷ್ಟಿ ಸಾಮರ್ಥ್ಯ (Vision Standard) ಸರಿಯಾಗಿರಬೇಕು
  • ಇಲಾಖೆ ನಿಗದಿಪಡಿಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು

01-01-2026ಕ್ಕೆ ಅನ್ವಯವಾಗುವಂತೆ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 33 ವರ್ಷ

ವಯಸ್ಸಿನ ಸಡಿಲಿಕೆ:

  • OBC – 3 ವರ್ಷ
  • SC / ST – 5 ವರ್ಷ
  • ಮಾಜಿ ಸೈನಿಕರು, ಅಂಗವಿಕಲರಿಗೆ – ನಿಯಮಾನುಸಾರ

ಆಯ್ಕೆಯಾದ ಅಭ್ಯರ್ಥಿಗಳಿಗೆ:

  • ಮೂಲ ವೇತನ: ₹18,000 (Level-1)
  • DA, HRA, TA ಸೇರಿ
  • ಆರಂಭಿಕ ಮಾಸಿಕ ವೇತನ ಸುಮಾರು ₹25,000 – ₹30,000

ಇದರೊಂದಿಗೆ ರೈಲ್ವೆ ಪಾಸ್, ವೈದ್ಯಕೀಯ ಸೌಲಭ್ಯಗಳೂ ಲಭ್ಯವಿರುತ್ತದೆ. 


ರೈಲ್ವೆ ನೇಮಕಾತಿ ಹಂತಗಳು ಈ ರೀತಿ ಇರುತ್ತವೆ:

01. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)

  • ಗಣಿತ
  • ಸಾಮಾನ್ಯ ಜ್ಞಾನ
  • ವಿಜ್ಞಾನ
  • ರೀಸನಿಂಗ್

02. ದೈಹಿಕ ದಕ್ಷತಾ ಪರೀಕ್ಷೆ (PET)

  • ಓಟ
  • ತೂಕ ಹೊರುವ ಸಾಮರ್ಥ್ಯ

03. ದಾಖಲೆಗಳ ಪರಿಶೀಲನೆ

04. ವೈದ್ಯಕೀಯ ಪರೀಕ್ಷೆ


ಅಭ್ಯರ್ಥಿಗಳು ಕೆಳಗಿನ ಕ್ರಮವನ್ನು ಅನುಸರಿಸಬೇಕು:

  • ಅಧಿಕೃತ ವೆಬ್‌ಸೈಟ್  www.rrbapply.gov.in  ಗೆ ಭೇಟಿ ನೀಡಿ.
  • ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಮೂಲಕ ನೋಂದಣಿ ಮಾಡಿಕೊಳ್ಳಿ.
  • ವೈಯಕ್ತಿಕ ಮತ್ತು ಶೈಕ್ಷಣಿಕ ವಿವರ  ಸರಿಯಾಗಿ ಭರ್ತಿ ಮಾಡಿ.
  • ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕ ಪಾವತಿ ಮಾಡಬೇಕು.
    • ಸಾಮಾನ್ಯ ವರ್ಗ: ₹500
    • SC / ST / ಮಹಿಳೆಯರು: ₹250
  • ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ. 

ಹುದ್ದೆಗಳ ಸಂಖ್ಯೆ ಹೆಚ್ಚು ಇದ್ದರೂ ಸ್ಪರ್ಧೆಯೂ ಹೆಚ್ಚಾಗಿರುವುದರಿಂದ:

  • ಈಗಿನಿಂದಲೇ ಪರೀಕ್ಷಾ ಸಿದ್ಧತೆ ಆರಂಭಿಸಿ.
  • ಹಳೆಯ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಿ. 
  • ಪ್ರಚಲಿತ ವಿದ್ಯಮಾನಗಳನ್ನು ಪ್ರತಿದಿನ ಓದಿರಿ.

ಕನ್ನಡಿಗ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.


ಭಾರತೀಯ ರೈಲ್ವೆ ನೇಮಕಾತಿ 10ನೇ ತರಗತಿ ಮತ್ತು ಐಟಿಐ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಭದ್ರ ಭವಿಷ್ಯ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ.

> ಅಧಿಕೃತ ಅಧಿಸೂಚನೆಯ ಪಿಡಿಎಫ್ ಮತ್ತು ವಲಯವಾರು ಮಾಹಿತಿಗಾಗಿ ನಿಮ್ಮ ಆಯಾ RRB ವೆಬ್‌ಸೈಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ.

Leave a Comment