ಕರ್ನಾಟಕ ರಾಜ್ಯದ ರೈತರಿಗೆ ಕೃಷಿ ಇಲಾಖೆ ಮತ್ತೊಂದು ಮಹತ್ವದ ಸಹಾಯ ಯೋಜನೆಯನ್ನು ಜಾರಿಗೊಳಿಸಿದೆ. ಬೆಳೆ ಸಂಗ್ರಹಣೆ, ಮಳೆ ಹಾನಿ ತಪ್ಪಿಸಿಕೊಳ್ಳುವುದು ಹಾಗೂ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಕಾಯ್ದಿರಿಸುವ ಉದ್ದೇಶದಿಂದ ಉಚಿತ ಅಥವಾ ಭಾರಿ ಸಹಾಯಧನದಲ್ಲಿ ತಾರಪಲ್ ವಿತರಣೆ ಮಾಡುವ ಯೋಜನೆಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆ ಬಹಳ ಸಹಾಯಕರವಾಗಿದ್ದು, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನದಲ್ಲಿದೆ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಮೂಲಕ ಈ ಸೌಲಭ್ಯವನ್ನು ಪಡೆಯಬಹುದು.
ತಾರಪಲ್ ಯೋಜನೆಯ ಅಗತ್ಯವೇನು?
ಕೃಷಿ ಕಾರ್ಯದಲ್ಲಿ ತಾರಪಲ್ ಅತ್ಯಂತ ಉಪಯುಕ್ತವಾದ ಸಾಧನವಾಗಿದೆ. ಬೆಳೆ ಕಟಾವು ಮಾಡಿದ ನಂತರ ಧಾನ್ಯ, ಮೆಕ್ಕೆಜೋಳ, ಜೋಳ, ಕಾಳುಗಳು, ಮೆಣಸು, ಈರುಳ್ಳಿ, ಮೆಣಸಿನಕಾಯಿ ಮುಂತಾದ ಬೆಳೆಗಳನ್ನು ಬಿಸಿಲು ಹಾಗೂ ಮಳೆಯಿಂದ ರಕ್ಷಿಸಲು ತಾರಪಲ್ ಅಗತ್ಯವಾಗುತ್ತದೆ.
ಬಹುತೇಕ ರೈತರು ಮಾರುಕಟ್ಟೆಯಲ್ಲಿ ಲಭ್ಯವಿರುವ ತಾರಪಲ್ ಖರೀದಿಸಲು ಸಾಧ್ಯವಾಗದೆ, ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಅಥವಾ ಹಳೆಯ ತಾರಪಲ್ ಬಳಸುತ್ತಾರೆ. ಇದರಿಂದ ಬೆಳೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಇಲಾಖೆ ಈ ಸಹಾಯಧನ ತಾರಪಲ್ ಯೋಜನೆಯನ್ನು ಜಾರಿಗೆ ತಂದಿದೆ.
ಏನಿದು ಕೃಷಿ ಇಲಾಖೆಯ ತಾರಪಲ್ ಯೋಜನೆ?
ಈ ಯೋಜನೆಯಡಿ ಅರ್ಹ ರೈತರಿಗೆ ಉತ್ತಮ ಗುಣಮಟ್ಟದ ತಾರಪಲ್ ಅನ್ನು ಉಚಿತವಾಗಿ ಅಥವಾ ಭಾರಿ ಸಬ್ಸಿಡಿಯೊಂದಿಗೆ ನೀಡಲಾಗುತ್ತದೆ. ಯೋಜನೆಯ ಉದ್ದೇಶ ರೈತರ ಬೆಳೆ ರಕ್ಷಣೆಗೆ ನೆರವಾಗುವುದು ಮತ್ತು ರೈತರ ಆರ್ಥಿಕ ಭಾರವನ್ನು ಕಡಿಮೆ ಮಾಡುವ ದೇಶದಿಂದ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ.
ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ಅರ್ಜಿ ಹಾಕಬಹುದು.
ತಾರಪಲ್ಗೆ ಎಷ್ಟು ಸಹಾಯಧನ ಸಿಗುತ್ತದೆ?
> ಈ ಯೋಜನೆಯಡಿ ಸಹಾಯಧನವನ್ನು ವರ್ಗಾನುಸಾರವಾಗಿ ನಿಗದಿಪಡಿಸಲಾಗಿದೆ.
- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ರೈತರಿಗೆ ತಾರಪಲ್ಗೆ 90% ವರೆಗೆ ಸಹಾಯಧನ ಸಿಗುತ್ತದೆ.
- ಹಿಂದುಳಿದ ವರ್ಗ (OBC) ಮತ್ತು ಸಾಮಾನ್ಯ ವರ್ಗದ ರೈತರಿಗೆ 50% ರಿಂದ 75% ವರೆಗೆ ಸಹಾಯಧನ ಲಭ್ಯವಿರುತ್ತದೆ.
ಅಂದರೆ, ಬಹುತೇಕ ರೈತರು ತಾರಪಲ್ಗಾಗಿ ತುಂಬಾ ಕಡಿಮೆ ಹಣ ಪಾವತಿಸಬೇಕಾಗುತ್ತದೆ ಅಥವಾ ಕೆಲ ಸಂದರ್ಭಗಳಲ್ಲಿ ಸಂಪೂರ್ಣ ಉಚಿತವಾಗಿಯೇ ತಾರಪಲ್ ದೊರೆಯುತ್ತದೆ.
ತಾರಪಲ್ ಗುಣಮಟ್ಟ ಮತ್ತು ಗಾತ್ರದ ಬಗ್ಗೆ ಮಾಹಿತಿ.
> ಕೃಷಿ ಇಲಾಖೆ ವಿತರಿಸುವ ತಾರಪಲ್ ಉತ್ತಮ ಗುಣಮಟ್ಟದ್ದಾಗಿದ್ದು, ದೀರ್ಘಕಾಲ ಬಳಸಲು ಅನುಕೂಲವಾಗಿರುತ್ತದೆ.
- ತಾರಪಲ್ ದಪ್ಪ: 250 ರಿಂದ 300 GSM
- ಮಳೆ ಮತ್ತು ಬಿಸಿಲಿಗೆ ತಡೆಯುವ ಸಾಮರ್ಥ್ಯ ಇರುತ್ತದೆ.
- ಬೆಳೆ ಸಂಗ್ರಹಣೆ ಮತ್ತು ಕೃಷಿ ಬಳಕೆಗೆ ಅತ್ಯಂತ ಸೂಕ್ತವಾಗಿರುತ್ತದೆ.
ಗಾತ್ರದ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ
6×8 ಮೀಟರ್ ಅಥವಾ ಅದಕ್ಕಿಂತ ದೊಡ್ಡ ಗಾತ್ರದ ತಾರಪಲ್ ಲಭ್ಯವಿರುತ್ತದೆ. ಗಾತ್ರವು ಜಿಲ್ಲೆಯ ಲಭ್ಯತೆ ಮತ್ತು ಅಗತ್ಯದ ಆಧಾರದ ಮೇಲೆ ಬದಲಾಗಬಹುದು.
ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
> ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮುಖ್ಯ ಅರ್ಹತಾ ಮಾನದಂಡಗಳಿವೆ:
- ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.
- ಅರ್ಜಿ ಹಾಕುವ ರೈತನ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು.
- RTC / ಪಹಾಣಿ ಇರಬೇಕು.
- FRUITS ID ಕಡ್ಡಾಯ.
FRUITS ID ಇಲ್ಲದೇ ಇದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ, ಅರ್ಜಿ ಸಲ್ಲಿಸುವ ಮೊದಲು FRUITS ID ಮಾಡಿಕೊಂಡಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು(DOCUMENTS).
> ತಾರಪಲ್ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ರೈತರು ಹತ್ತಿರ ಈ ದಾಖಲೆಗಳು ಕಡ್ಡಾಯವಾಗಿ ಇರಬೇಕು:
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ಬುಕ್ (ಖಾತೆ ವಿವರಗಳು)
- RTC ಅಥವಾ ಪಹಾಣಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ಸಂಖ್ಯೆ
- FRUITS ID ಸಂಖ್ಯೆ
ಈ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಅರ್ಜಿ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಳ್ಳುತ್ತದೆ.
ತಾರಪಲ್ಗೆ ಅರ್ಜಿ ಸಲ್ಲಿಸುವುದು ಹೇಗೆ?
> ಈ ಯೋಜನೆಗೆ ಆನ್ಲೈನ್ ಅರ್ಜಿ ವ್ಯವಸ್ಥೆ ಇರುವುದಿಲ್ಲ. ಅರ್ಜಿಯನ್ನು ಕಡ್ಡಾಯವಾಗಿ ಆಫ್ಲೈನ್ ಮೂಲಕ ಹಾಕಬೇಕು.
ಅರ್ಜಿಯ ಕ್ರಮ ಈ ರೀತಿ ಇರುತ್ತದೆ:
- ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (RKS) ಭೇಟಿ ನೀಡಿ.
- ಕೃಷಿ ಅಧಿಕಾರಿಗಳಿಂದ ತಾರಪಲ್ ಅರ್ಜಿ ಫಾರ್ಮ್ ಪಡೆದುಕೊಳ್ಳಿ.
- ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅರ್ಜಿಗೆ ಲಗತ್ತಿಸಿ.
- ಅರ್ಜಿಯನ್ನು ಕಚೇರಿಗೆ ಸಲ್ಲಿಸಿ.
- ಅರ್ಜಿ ಸಲ್ಲಿಸಿದ ಸ್ವೀಕೃತಿಯನ್ನು ಪಡೆದುಕೊಳ್ಳಿ.
ಮುಖ್ಯ ಸೂಚನೆ: ಎಲ್ಲರಿಗೂ ತಾರಪಲ್ ಸಿಗುವುದಿಲ್ಲ.
> ಈ ಯೋಜನೆಗೆ ಸರ್ಕಾರವು ಪ್ರತಿ ಜಿಲ್ಲೆಗೆ ನಿರ್ದಿಷ್ಟ ಗುರಿ (Target) ನಿಗದಿಪಡಿಸಿದೆ.
- ಯಾರು ಮೊದಲಿಗೆ ಅರ್ಜಿ ಸಲ್ಲಿಸುತ್ತಾರೋ, ಅವರಿಗೆ ಮೊದಲ ಆದ್ಯತೆ ನೀಡಲಾಗುವುದು.
- ತಡವಾಗಿ ಅರ್ಜಿ ಸಲ್ಲಿಸಿದವರಿಗೆ ತಾರಪಲ್ ಅಥವಾ ಸಬ್ಸಿಡಿ ಸಿಗದೇ ಹೋಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ರೈತರು ಸಮಯ ಕಳೆಯದೆ, ದಾಖಲೆಗಳನ್ನು ಸಿದ್ಧ ಮಾಡಿಕೊಂಡು ಬೇಗನೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಹಾಕುವುದು ಅತ್ಯಂತ ಮುಖ್ಯ.
ಈ ಯೋಜನೆಯ ಮಹತ್ವ.
> ಈ ತಾರಪಲ್ ಯೋಜನೆಯು ರೈತರಿಗೆ ಕೇವಲ ಒಂದು ಉಪಕರಣ ನೀಡುವುದಲ್ಲ, ಇದು ಅವರ ಬೆಳೆ ರಕ್ಷಣೆಗೆ ಹಾಗೂ ಆದಾಯ ಭದ್ರತೆಗೆ ನೆರವಾಗುವ ಮಹತ್ವದ ಯೋಜನೆಯಾಗಿದೆ. ಮಳೆ, ಬಿಸಿಲು ಅಥವಾ ಅನಾಹುತಗಳಿಂದ ಬೆಳೆ ಹಾನಿಯಾಗದಂತೆ ತಡೆಯುವಲ್ಲಿ ಈ ತಾರಪಲ್ ಬಹಳ ಸಹಾಯ ಮಾಡುತ್ತದೆ.
ಸಣ್ಣ ರೈತರಿಗೆ ಇದು ದೊಡ್ಡ ಆರ್ಥಿಕ ನೆರವಾಗಿದ್ದು, ಕೃಷಿ ಇಲಾಖೆಯ ಈ ಕ್ರಮವನ್ನು ರೈತ ಸಮುದಾಯ ಸ್ವಾಗತಿಸಿದೆ.
ಕೊನೆ ಮಾತು…
> ನೀವು ರೈತರಾಗಿದ್ದರೆ ಮತ್ತು ಈ ಯೋಜನೆಯ ಅರ್ಹತೆ ಹೊಂದಿದ್ದರೆ, ತಡಮಾಡದೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಸರ್ಕಾರದ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ.
> ಇಂತಹ ರೈತೋಪಯೋಗಿ ಮಾಹಿತಿ ಇನ್ನಷ್ಟು ಜನರಿಗೆ ತಲುಪಿಸಲು ಈ ಮಾಹಿತಿಯನ್ನು ನಿಮ್ಮ ಸ್ನೇಹಿತ ರೈತರ ಜೊತೆ ಹಂಚಿಕೊಳ್ಳಿ.