ಕುರಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ 1,75,000 ರೂಪಾಯಿ ವೆಚ್ಚದಲ್ಲಿ 20 ಕುರಿ / ಮೇಕೆ ಮತ್ತು ಒಂದು ಟಗರು / ಹೋತ ಘಟಕವನ್ನು ನಿರ್ಮಿಸಲಾಗುತ್ತದೆ. ಒಟ್ಟು ವೆಚ್ಚದಲ್ಲಿ 50% ಸಾಲ, 25% ಸಹಾಯಧನ ಮತ್ತು 25% ಫಲಾನುಭವಿ ವಂತಿಕೆ ಇರುತ್ತದೆ.
ಈ ಯೋಜನೆಯನ್ನು ಮೂರು ಹಂತಗಳಾಗಿ ವಿಂಗಡಿಸಿದೆ.
01. NCDC ಸಾಲ.
> ಈ ಹಂತದಲ್ಲಿ 50% (87,500) ಸಾಲ ಸೌಲಭ್ಯವಿರುತ್ತದೆ.
02. ಸರ್ಕಾರದ ಸಹಾಯಧನ (Subsidy).
> ಈ ಹಂತದಲ್ಲಿ 25% (43,750) ಉಚಿತ ಸಹಾಯಧನ ಸೌಲಭ್ಯ ಇರುತ್ತದೆ.
03. ಫಲಾನುಭವಿ ವಂತಿಕೆ.
> ಇದರಲ್ಲಿ 25% (43,750) ಗಳನ್ನು ಅರ್ಜಿದಾರರೇ ಬರಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Documents).
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಪಡಿತರ ಚೀಟಿ
- ಅರ್ಜಿದಾರರ ಭಾವಚಿತ್ರಗಳು
- ಪಾಸ್ ಬುಕ್ ಪ್ರತಿ
ಅರ್ಜಿಸಲ್ಲಿಸುವುದು ಹೇಗೆ?
ಯೋಜನೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ತಾಲೂಕು ಪಶುಸಂಗೋಪನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಭೇಟಿ ನೀಡಿ. ನಿಗದಿತ ಅವಧಿಯಲ್ಲಿಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸ್ಥಳಿಯ ಕಚೇರಿಗೆ ಸಲ್ಲಿಸಬೇಕು.