ಅಮೃತ ಸ್ವಾಭಿಮಾನಿ ಯೋಜನೆ – ರೈತರಿಗೆ ಗುಡ್ ನ್ಯೂಸ್, ಕುರಿ ಸಾಕಾಣಿಕೆಗೆ ಸರ್ಕಾರದಿಂದ 43,750 ಸಹಾಯಧನ. ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕುರಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ 1,75,000 ರೂಪಾಯಿ ವೆಚ್ಚದಲ್ಲಿ 20 ಕುರಿ / ಮೇಕೆ ಮತ್ತು ಒಂದು ಟಗರು / ಹೋತ  ಘಟಕವನ್ನು ನಿರ್ಮಿಸಲಾಗುತ್ತದೆ. ಒಟ್ಟು ವೆಚ್ಚದಲ್ಲಿ 50% ಸಾಲ, 25% ಸಹಾಯಧನ ಮತ್ತು 25% ಫಲಾನುಭವಿ ವಂತಿಕೆ ಇರುತ್ತದೆ.

ಈ ಯೋಜನೆಯನ್ನು ಮೂರು ಹಂತಗಳಾಗಿ ವಿಂಗಡಿಸಿದೆ.

01. NCDC ಸಾಲ.

> ಈ ಹಂತದಲ್ಲಿ 50% (87,500) ಸಾಲ ಸೌಲಭ್ಯವಿರುತ್ತದೆ.

02. ಸರ್ಕಾರದ ಸಹಾಯಧನ (Subsidy).

> ಈ ಹಂತದಲ್ಲಿ 25% (43,750) ಉಚಿತ ಸಹಾಯಧನ ಸೌಲಭ್ಯ ಇರುತ್ತದೆ.

03. ಫಲಾನುಭವಿ ವಂತಿಕೆ.

> ಇದರಲ್ಲಿ 25% (43,750) ಗಳನ್ನು ಅರ್ಜಿದಾರರೇ ಬರಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Documents).

  • ಆಧಾರ್ ಕಾರ್ಡ್ 
  • ಜಾತಿ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಅರ್ಜಿದಾರರ ಭಾವಚಿತ್ರಗಳು
  • ಪಾಸ್ ಬುಕ್ ಪ್ರತಿ

ಅರ್ಜಿಸಲ್ಲಿಸುವುದು ಹೇಗೆ?

ಯೋಜನೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ತಾಲೂಕು ಪಶುಸಂಗೋಪನ ಮತ್ತು ಪಶು  ವೈದ್ಯಕೀಯ ಸೇವಾ ಇಲಾಖೆಯ ಕಚೇರಿಗೆ ಭೇಟಿ ನೀಡಿ. ನಿಗದಿತ ಅವಧಿಯಲ್ಲಿಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸ್ಥಳಿಯ ಕಚೇರಿಗೆ ಸಲ್ಲಿಸಬೇಕು.

Leave a Comment