ಮುದ್ರಾ ಲೋನ್ ಯೋಜನೆ ಎಂದರೇನು?
> ಸಣ್ಣಪುಟ್ಟ ವ್ಯಾಪಾರ ಮಾಡಲು ಅಥವಾ ಬಿಜಿನೆಸ್ ಮಾಡಲು ಕೇಂದ್ರ ಸರ್ಕಾರದಿಂದ ಕೊಡುವ ಸಾಲ ಇದಾಗಿದೆ. ಇದರಲ್ಲಿ 50,000 ದಿಂದ 20 ಲಕ್ಷದವರೆಗೆ ಸರ್ಕಾರದಿಂದ ಸಾಲ ಲಭ್ಯವಿದೆ.
> ಸಣ್ಣಪುಟ್ಟ ಬುಸಿನೆಸ್ ಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ ಇದನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು.
> ಹಾಗಿದ್ರೆ ಯಾರ್ಯಾರು ಈ ಲೋನ್ ಉಪಯೋಗವನ್ನು ಪಡೆದುಕೊಳ್ಳಬಹುದು ಎಂಬುದನ್ನು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ.
ಈ ಯೋಜನೆ ಅಡಿಯಲ್ಲಿ ನಾಲ್ಕು ತರಹದ ಲೋನ್ ಗಳಿವೆ.
01. ಶಿಶು ಲೋನ್ (Shishu Loan)
> ಇದರಲ್ಲಿ ಐವತ್ತು ಸಾವಿರದವರೆಗೆ ಲೋನ್ ಪಡೆಯಬಹುದು.
> ಹೊಸದಾಗಿ ಪ್ರಾರಂಭಿಸುವ ಬಿಸಿನೆಸ್ ಗಳಿಗೆ ಮಾತ್ರ.
02. ಕಿಶೋರ್ ಲೋನ್ (Kishore Loan)
> ಇದರಲ್ಲಿ ಐವತ್ತು ಸಾವಿರದಿಂದ ಐದು ಲಕ್ಷದವರೆಗೆ ಸಾಲ ಪಡೆಯಬಹುದು.
> ಇದು ನಿಮ್ಮತ್ರ ಆಲ್ರೆಡಿ ಬಿಸಿನೆಸ್ ಇದ್ದು ಅದನ್ನು ಇನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಹಾಯ ಮಾಡುತ್ತದೆ.
03. ತರುಣ್ ಲೋನ್ (Tarun Loan)
> ಇದರಲ್ಲಿ ಐದು ಲಕ್ಷದಿಂದ 10 ಲಕ್ಷಗಳವರೆಗೆ ಸಾಲ ಸಿಗುತ್ತದೆ.
> ನಿಮ್ಮ ಬಿಜಿನೆಸ್ ಆಲ್ರೆಡಿ ಚೆನ್ನಾಗಿ ನಡೆದಿದೆ ಆದರೆ ಅದನ್ನು ಇನ್ನೂ ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಲ ಈ ಲೋನ್ ಉಪಯುಕ್ತವಾಗಿದೆ.
04. ತರುಣ್ ಪ್ಲಸ್ ಲೋನ್ (Tarun Plus Loan)
> ಇದರಲ್ಲಿ 10 ಲಕ್ಷದಿಂದ 20 ಲಕ್ಷಗಳವರೆಗೆ ಸಾಲ ಪಡೆಯಬಹುದು.
> ಈ ಸಾಲವನ್ನು ಪಡೆಯಲು ನೀವು ಮೊದಲು ತರುಣ್ ಲೋನ್ ಅನ್ನು ತೆಗೆದುಕೊಂಡು ಅದನ್ನು ಯಶಸ್ವಿಯಾಗಿ ಸರಿಯಾದ ಸಮಯಕ್ಕೆ ಮರು ಪಾವತಿಸಿರಬೇಕು.
ಅರ್ಹತೆಗಳು.
- ನೀವು ಭಾರತದ ಪ್ರಜೆಯಾಗಿರಬೇಕು
- ವಯಸ್ಸು 18 ಗಿಂತ ಮೇಲ್ಪಟ್ಟಿರಬೇಕು
- ಇದಕ್ಕೂ ಮೊದಲು ಯಾವುದೇ ರೀತಿಯ ಲೋನ್ ತೆಗೆದುಕೊಂಡು ಮೋಸ ಮಾಡಿರಬಾರದು.
ದಾಖಲೆಗಳು (Documents)
- ಆಧಾರ್ ಕಾರ್ಡ್
- ಅಡ್ರಸ್ ಪ್ರೂಫ್ (Address Proof)
- ಭಾವಚಿತ್ರಗಳು (Photos)
- ಬಿಜಿನೆಸ್ ಕೆ ಸಂಬಂಧಪಟ್ಟ ದಾಖಲೆಗಳು
- ನಿಮ್ಮ ಬಿಜಿನೆಸ್ ಪ್ಲಾನ್ ಪ್ರಾಜೆಕ್ಟ್
- ಬ್ಯಾಂಕ್ ಸ್ಟೇಟ್ಮೆಂಟ್ (Bank Statement)
ನೀವು ಅರ್ಜಿ ಸಲ್ಲಿಸುವುದು ಹೇಗೆ?
ನೀವು ಹೊಂದಿರುವ ಯಾವುದೇ ಬ್ಯಾಂಕ್ ಅಕೌಂಟ್ ನ ಬ್ಯಾಂಕಿಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಥವಾ ಆನ್ಲೈನ್ ಮುಖಾಂತರ ಕೂಡ ಅರ್ಜಿ ಸಲ್ಲಿಸಬಹುದು. ಸಂಬಂಧಪಟ್ಟ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇನ್ನೂ ಮುಖ್ಯವಾದ ಮಾಹಿತಿಗಳನ್ನು ತಿಳಿದುಕೊಳ್ಳಿ.
ಲೋನ್ ಮರುಪಾವತಿಸುವುದು ಹೇಗೆ?
> ಮುದ್ರಾ ಲೋನ್ ಮರುಪಾವತಿ ಸದನ ನಿಮಗೆ ಮೂರರಿಂದ ಐದು ವರ್ಷ ಕಾಲಾವಕಾಶವಿರುತ್ತದೆ.
> ಸಾಲವನ್ನು ತಿಂಗಳ ಕಂತುಗಳಲ್ಲಿ ಕಟ್ಟುತ್ತಾ ಹೋಗಬಹುದು.
ಸೂಚನೆ: ಇದು ಯಾವುದೇ ರೀತಿಯ ಸಬ್ಸಿಡಿ ಅಥವಾ ಸಹಾಯಧನ ಸರ್ಕಾರದಿಂದಆಗಿರುವುದಿಲ್ಲ ಇದನ್ನು ನೀವು ಕಡ್ಡಾಯವಾಗಿ ಮರುಪಾವತಿಸಬೇಕು.