ಗಂಗಾಕ ಲ್ಯಾಣ ಯೋಜನೆ ಎಂದರೇನು?
ಬೋರ್ ವೆಲ್ ಕೊರೆಯುವುದು ಅಥವಾ ಕೊಳವೆ ಬಾವಿ ಕೊರೆಯುವ ಮೂಲಕ ಸರ್ಕಾರ ರೈತರಿಗೆ ಮತ್ತು ಅತಿ ಸಣ್ಣ ರೈತರಿಗೆ ಕೃಷಿಯಲ್ಲಿ ಅನುಕೂಲ ಆಗುವ ರೀತಿಯಲ್ಲಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಗಂಗಾ ಕಲ್ಯಾಣ ಯೋಜನೆ ಈ ಯೋಜನೆ ಅಡಿಯಲ್ಲಿ ಎಲ್ಲಾ ರೈತರಿಗೆ ಉಚಿತ ಸಬ್ಸಿಡಿ ದೊರೆಯುತ್ತದೆ. ಹಾಗಾದರೆ ರೈತರು ಇದರ ಅನುಕೂಲವನ್ನು ಹೇಗೆ ಪಡೆಯಬೇಕು? , ಏನೇನು ಮಾಡದಂಡಗಳಿವೆ? ಎಂಬುದನ್ನು ವಿವರವಾಗಿ ನೋಡೋಣ.
ಪ್ರಮುಖ ಯೋಜನೆಗಳು ಮತ್ತು ಅದರ ಸೌಲಭ್ಯಗಳು.
01. ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆ:
> ಒಂದು ಅಥವಾ ಎರಡು ಎಕರೆಗಳಷ್ಟು ಭೂಮಿಯನ್ನು ಹೊಂದಿರುವ ರೈತರಿಗೆ ಈ ಯೋಜನೆ ಅಡಿಯಲ್ಲಿ 3.75 ಲಕ್ಷ ಸಬ್ಸಿಡಿ ಮತ್ತು 50,000 ಸಾಲವನ್ನು ಯೋಜನೆ ಅಡಿಯಲ್ಲಿ ದೊರೆಯುತ್ತದೆ.
> ಅಂದರೆ ಸಬ್ಸಿಡಿಯನ್ನು ಹೊರತುಪಡಿಸಿ ಉಳಿದ ಐವತ್ತು ಸಾವಿರಕ್ಕೆ ವಾರ್ಷಿಕ 4% ಬಡ್ಡಿ ಇರುತ್ತದೆ.
02. ಸಾಮೂಹಿಕ ನೀರಾವರಿ ಕೊಳವೆ ಬಾವಿ ಯೋಜನೆ:
> ಈ ಯೋಜನೆಯು ಪ್ರವರ್ಗ-1, 2 ಎ, 3 ಎ ಮತ್ತು 3ಬಿ ಗೆ ಅನ್ವಯವಾಗುತ್ತದೆ.
> ಕನಿಷ್ಠ ಮೂರು ಸಣ್ಣ ಅಥವಾ ಅತಿ ಸಣ್ಣ ರೈತರಿಗೆ 8 ಎಕರೆ ಅಥವಾ ಅದಕ್ಕಿಂತ ಜಾಸ್ತಿ ಇರುವ ಕೃಷಿ ಭೂಮಿಗೆ ಈ ಯೋಜನೆ ಸಹಾಯವಾಗುತ್ತೆ.
03. ಸಾಮೂಹಿಕ ನೀರಾವರಿ ಸೌಲಭ್ಯ.
> ಇದರಿಂದ 08ರಿಂದ 15 ಎಕರೆ ಹೊಂದಿರುವ ಘಟಕಗಳಿಗೆ 4 ಲಕ್ಷ ಸಬ್ಸಿಡಿ (ಸಹಾಯಧನ) ಎರಡು ಕೊಳವೆಬಾವಿ ದೊರೆಯುತ್ತದೆ.
> ಎಕರೆ ಜಮೀನು ಬಂದಿರುವಂತಹ ಘಟಕಗಳಿಗೆ 06 ಲಕ್ಷಗಳ ವೆಚ್ಚದಲ್ಲಿ ಮೂರು ಕೊಳವೆ ಭಾವಿಗಳು ದೊರೆಯುತ್ತದೆ.
04. ಸಾಮೂಹಿಕ ಏತ ನೀರಾವರಿ ಯೋಜನೆ.
> ಯೋಜನೆ ಅಡಿಯಲ್ಲಿ 2 ಲಕ್ಷ ಸಹಾಯಧನ 50,000 ಸಾಲ ದೊರೆಯುತ್ತದೆ.
> ಸಾಲ ಮರುಪಾವತಿ ಅವಧಿ 03 ವರ್ಷಗಳ ವರೆಗೆ ಇರುತ್ತದೆ, 04% ಬಡ್ಡಿ.
ಅರ್ಹತೆಗಳು.
- ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.
- ಪ್ರವರ್ಗ-1, 2 ಎ, 3 ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು.
- ವಯಸ್ಸು 18 ರಿಂದ 55 ವರ್ಷ.
- ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
- ಕುಟುಂಬದ ಆದಾಯವು ವಾರ್ಷಿಕವಾಗಿ 96,000 ಒಳಗೆ ಇರಬೇಕು.
- ಫಲಾನುಭವಿಗಳ ಒಂದು ಎಕರೆ 20 ಗುಂಟೆ ಯಿಂದ 5 ಎಕರೆಗಳ ವರೆಗೆ ಒಣ ಭೂಮಿಯನ್ನು ಹೊಂದಿರಬೇಕು.
ಬೇಕಾಗುವ ದಾಖಲೆಗಳು (Documents).
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಪ್ರತಿ
- RTC ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಭೂ ಕಂದಾಯ ಪಾವತಿಯ ರಸೀದಿ
- ಸ್ವಯಂ ಘೋಷಣ ಪತ್ರ
- ಖಾಸಗಿದಾರರ ಸ್ವಯಂ ಘೋಷಣ ಪತ್ರ
- ಭಾವಚಿತ್ರ
ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.ಇದರ ಸದುಪಯೋಗ ಪಡಿಸಿಕೊಳ್ಳಿ.