ಭೂ ಒಡೆತನ ಯೋಜನೆ – ಭೂ ರಹಿತ ಮಹಿಳೆಯರಿಗೆ ಭೂಮಿ ಖರೀದಿ ಮಾಡಲು ಸರ್ಕಾರದಿಂದ 12.50 ಲಕ್ಷ ವರೆಗೆ ಸಬ್ಸಿಡಿ.

ಭೂ ಒಡೆತನ ಯೋಜನೆ – ಕರ್ನಾಟಕ ಸರ್ಕಾರದಿಂದ ರಾಜ್ಯದ ಎಸ್ ಸಿ / ಎಸ್ ಟಿ ಭೂರಹಿತ ಮಹಿಳೆಯರಿಗೆ ಸ್ವಂತ ಭೂಮಿಯನ್ನು ಖರೀದಿ ಮಾಡಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಭೂಮಿ ರಹಿತ ಮಹಿಳೆಯರಿಗೆ ಭೂಮಿ ಖರೀದಿ ಮಾಡಲು 12.5 ಲಕ್ಷ ವರೆಗೆ ಸಬ್ಸಿಡಿ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ಮಾಹಿತಿ ಈ ಕೆಳಗಿನಂತೆ ನೀಡಿದೆ. ದಯವಿಟ್ಟು ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಹತೆಗಳು.

  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಭಾಗಕ್ಕೆ ಸೇರಿದವರಾಗಿರಬೇಕು (SC / ST).
  • ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು.
  • ಕರ್ನಾಟಕದ  ಖಾಯಂ ನಿವಾಸಿ ಆಗಿರಬೇಕು.
  • ಯಾವುದೇ ರೀತಿಯ ಸರ್ಕಾರಿ ಕೆಲಸದಲ್ಲಿ ಅಥವಾ ಅರೆ ಸರಕಾರಿ ಕೆಲಸದಲ್ಲಿ ಇರಬಾರದು.
  • ಯಾವುದೇ ರೀತಿಯ ಕೃಷಿ ಭೂಮಿಯನ್ನು ಹೊಂದಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (Documents).

  • ಕೃಷಿ ಕಾರ್ಮಿಕರ ದೃಢೀಕರಣ ಪತ್ರ.
  • ಭಾವಚಿತ್ರ ಫೋಟೋಸ್.
  • ಜಾತಿ ಪ್ರಮಾಣ ಪತ್ರ (ಚಾಲ್ತಿಯಲ್ಲಿರಬೇಕು).
  • ಆದಾಯ ಪ್ರಮಾಣ ಪತ್ರ (ಚಾಲ್ತಿಯಲ್ಲಿರಬೇಕು).
  • ಆಧಾರ್ ಕಾರ್ಡ್.

ಸಬ್ಸಿಡಿ (ಸಹಾಯಧನ) ಮತ್ತು ಸಾಲದ ವಿವರಗಳು.

>ಸರ್ಕಾರವ ಈ ಯೋಜನೆಯನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸಿದೆ.

01. ಮೊದಲನೇ  ವಿಭಾಗ.

ಈ  ವಿಭಾಗದಲ್ಲಿ ನಾಲ್ಕು ಜಿಲ್ಲೆಗಳನ್ನು ಖಚಿತಪಡಿಸಿದೆ. ನಾಲ್ಕು ಜಿಲ್ಲೆಗಳಿಗೆ 12.50 ಲಕ್ಷ ಸಹಾಯಧನ ಮತ್ತು 12.50 ಲಕ್ಷ ಸಾಲವಾಗಿ ಕೊಡುತ್ತದೆ, ಒಟ್ಟು ಮೊತ್ತ 25 ಲಕ್ಷ. 

A.  ಬೆಂಗಳೂರು ನಗರ ಜಿಲ್ಲೆ

B.  ಬೆಂಗಳೂರು ಗ್ರಾಮಾಂತರ ಜಿಲ್ಲೆ

C. ಚಿಕ್ಕಬಳ್ಳಾಪುರ ಜಿಲ್ಲೆ

D. ರಾಮನಗರ ಜಿಲ್ಲೆ

02. ಎರಡನೆಯ ವಿಭಾಗ.

ಈ ಭಾಗದಲ್ಲಿ ರಾಜ್ಯದ ಉಳಿದ 27 ಜಿಲ್ಲೆಗಳಿಗೆ 10 ಲಕ್ಷ ಸಹಾಯಧನ ಮತ್ತು 10 ಲಕ್ಷ ಸಾಲವಾಗಿ ಕೊಡುತ್ತದೆ. ಒಟ್ಟು ಮೊತ್ತ 20 ಲಕ್ಷ.

ಸಾಲವನ್ನು ಮರುಪಾವತಿಸುವುದು ಹೇಗೆ?

ಈ ಸಾಲವನ್ನು ಮರುಪಾವತಿಸಲು ನಿಮಗೆ 10 ವರ್ಷಗಳ ಕಾಲ ಸುಧೀರ್ಘ ಕಾಲಾವಕಾಶವಿರುತ್ತದೆ ಪ್ರತಿ ಆರು (06) ತಿಂಗಳಿಗೊಮ್ಮೆ ಕಂತುಗಳ ರೀತಿಯಲ್ಲಿ ಮರುಪಾವತಿಸಿ. ಇದು ಬಡ ಕುಟುಂಬಗಳಿಗೆ ನೆರವು ನೀಡಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಈ ಯೋಜನೆಗೆ ಅರ್ಹತೆ ಹೊಂದಿರುವ ಎಸ್ ಸಿ / ಎಸ್ ಟಿ (SC / ST) ಮಹಿಳೆಯರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಸೇವಾ ಸಿಂಧು , ಗ್ರಾಮ ವನ್ ಗಳಿಗೆ ಭೇಟಿ ನೀಡಿ, ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ.

Leave a Comment