ಯಶಸ್ವಿನಿ ಆರೋಗ್ಯ ಯೋಜನೆ: ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ.

2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ನೊಂದಾಯಿಸಲು ನಿಗದಿತ ಸಮಯ ಜನವರಿ 03, 2026 ದಿನಾಂಕದಿಂದ ಶುರುವಾಗಿದೆ ಮತ್ತು ಮಾರ್ಚ್ 31, 2026 ರ ವರೆಗೂ ಸಮಯವಿರುತ್ತದೆ. ಅರ್ಜಿ ಸಲ್ಲಿಸಬೇಕೆಂದು ಇರುವವರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ “ಸೇವಾ ಸಿಂಧು ಸೇವಾ ಸಿಂಧು” ಪೋರ್ಟಲ್ ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸೋಕೆ ಬೇಕಾದ ಅರ್ಹತೆಗಳು.

  • ಅರ್ಜಿ ಸಲ್ಲಿಸೋಕೆ ಬೇಕಾದ ಅರ್ಹತೆಗಳು
  • ಕನಿಷ್ಠ ಮೂರು ತಿಂಗಳಗಳ ಕಾಲ ಸಹಕಾರ ಸಂಘಗಳ ಸದಸ್ಯರಾಗಿರಬೇಕು.
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್, ಇನ್ನಿತರ.

ನೋಂದಣಿ ವಿವರಗಳು.

  • ನೋಂದಣಿ ಆರಂಭ: ಜನವರಿ 03, 2026.   
  • ನೊಂದಣಿ ಕೊನೆಯ ದಿನಾಂಕ: ಮಾರ್ಚ್ 31, 2026.
  • ಚಿಕಿತ್ಸೆ ಅವಧಿ: ಏಪ್ರಿಲ್ 01, 2026 ರಿಂದ ಮಾರ್ಚ್ 31, 2027. 

ಬರಿಸಬೇಕಾದ ವಾರ್ಷಿಕ ಮೊತ್ತ.

  • ಗ್ರಾಮೀಣ ಪ್ರದೇಶದ ಒಟ್ಟು ನಾಲ್ವರ ಸದಸ್ಯರ ಕುಟುಂಬಕ್ಕೆ ವಾರ್ಷಿಕ 500ರೂಪಾಯಿಗಳು  ಮತ್ತು ಹೆಚ್ಚುವರಿ ಸದಸ್ಯರಿಗೆ ತಲಾ 100 ರೂಪಾಯಿಗಳು. 
  • ನಗರ ಪ್ರದೇಶದ ಒಟ್ಟು ನಾಲ್ವರ ಸದಸ್ಯರ ಕುಟುಂಬಕ್ಕೆ ವಾರ್ಷಿಕವಾಗಿ ಸಾವಿರ ರೂಪಾಯಿಗಳು ಮತ್ತು ಹೆಚ್ಚುವರಿ ಸದಸ್ಯರಿಗೆ ತಲಾ 200 ರೂಪಾಯಿಗಳಂತೆ ವಾರ್ಷಿಕವಾಗಿ ಭರಿಸಬೇಕು.
  • ಎಸ್ಸಿ / ಎಸ್ಟಿ ಕುಟುಂಬಕ್ಕೆ ಸರ್ಕಾರವೇ ಅವರ ಮೊತ್ತವನ್ನು ಭರಿಸುತ್ತದೆ. 

ಏಪ್ರಿಲ್ 01 ರಿಂದ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಣೆ ಪ್ರಾರಂಭವಾಗುತ್ತದೆ.

ಸೂಚನೆ: ತಪ್ಪಾದ ಮಾಹಿತಿ ಕೊಟ್ಟು  ನೊಂದಣಿ ಮಾಡಿಸಿದವರಿಗೆ ಸರ್ಕಾರದಿಂದ ದಂಡ ವಿಧಿಸಲಾಗುತ್ತದೆ ಮತ್ತು ಕಾರ್ಡನ್ನು ರದ್ದುಗೊಳಿಸಲಾಗುತ್ತದೆ.

Leave a Comment