ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆಯಾ? ಮೊಬೈಲ್‌ನಲ್ಲೇ ಮನೆಯಲ್ಲೇ ಕುಳಿತು ಚೆಕ್ ಮಾಡುವುದು ಹೇಗೆ? ಸಂಪೂರ್ಣ ವಿಧಾನ ಇಲ್ಲಿದೆ.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುತ್ತಿರುವ ಅತ್ಯಂತ ಮಹತ್ವದ ಯೋಜನೆಯಾಗಿದೆ. ಪ್ರತಿ ತಿಂಗಳು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿರುವುದರಿಂದ ಈ ಯೋಜನೆ ಮಹಿಳೆಯರ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಹಿಳೆಯರಿಗೆ ಒಂದು ಗೊಂದಲ ಎದುರಾಗಿದೆ ಅದೇನೆಂದರೆ,  “ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರಿಗೂ ಜಮಾ ಆಗ್ತಾ ಇದೆ ಅಂತ ಹೇಳ್ತಾ ಇದ್ದಾರೆ, ಆದರೆ ನಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ” ಮತ್ತು “ಹಣ ಜಮಾ ಆಗಿದೆಯೋ ಇಲ್ಲವೋ ಹೇಗೆ ಚೆಕ್ ಮಾಡಬೇಕು?”

ಇಂತಹ ಪ್ರಶ್ನೆಗಳು ಅನೇಕ ಫಲಾನುಭವಿಗಳಲ್ಲಿ ಮೂಡುತ್ತಿವೆ. ನಿಮ್ಮ ಮನೆಯಲ್ಲೇ ಕುಳಿತು, ಕೇವಲ ಮೊಬೈಲ್ ಬಳಸಿ, ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಟೆಪ್ ಬೈ ಸ್ಟೆಪ್ ಚೆಕ್ ಮಾಡುವ ವಿಧಾನವನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ.


ಇಲ್ಲ. ಇದು ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಷಯ. ಗೃಹಲಕ್ಷ್ಮಿ ಯೋಜನೆಯ ಹಣ ಹಂತ ಹಂತವಾಗಿ (Phase-wise) ಜಮಾ ಆಗುತ್ತದೆ. ಅಂದರೆ ಎಲ್ಲ ಫಲಾನುಭವಿಗಳಿಗೆ ಒಂದೇ ದಿನ ಹಣ ಜಮಾ ಆಗುವುದಿಲ್ಲ. ಬ್ಯಾಂಕ್ ಪ್ರಕ್ರಿಯೆ, ಸರ್ವರ್ ಲೋಡ್, ರಜೆ ದಿನಗಳು ಇತ್ಯಾದಿ ಕಾರಣಗಳಿಂದ ಹಣ ಜಮಾ ಆಗಲು ಸ್ವಲ್ಪ ತಡವಾಗಬಹುದು. ಕೆಲವೊಮ್ಮೆ ವಾರಾಂತ್ಯ ಅಥವಾ ಬ್ಯಾಂಕ್ ರಜೆ ಇದ್ದರೆ ಹಣ ಮುಂದಿನ ದಿನಗಳಲ್ಲಿ ಜಮಾ ಆಗುತ್ತದೆ. ಹಾಗಾಗಿ ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ ಅಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ.

ರೈತರಿಗೆ ಉಪಯುಕ್ತ ವಾಗುವ ಈ ಮಾಹಿತಿಯನ್ನು ಓದಿರಿ: ಮನೆಬಾಗಿಲಿ ಇ-ಪೌತಿ ಖಾತೆ ಸೇವೆ | ಮೃತ ರೈತರ ಜಮೀನು ವರ್ಗಾವಣೆಗೆ ಈಗ ಕಚೇರಿ ಅಲೆದಾಟ ಇಲ್ಲ.


ಹಣ ಜಮಾ ಆಗಿದೆಯೇ ಎಂದು ನಿಯಮಿತವಾಗಿ ಚೆಕ್ ಮಾಡುವುದರಿಂದ:

  • ಹಣ ಬಂದಿದೆಯೋ ಇಲ್ಲವೋ ಸ್ಪಷ್ಟವಾಗಿ ತಿಳಿಯುತ್ತದೆ.
  • ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೆ ಬೇಗ ಗುರುತಿಸಬಹುದು.
  • ಬ್ಯಾಂಕ್ ಅಥವಾ ಸೇವಾ ಕೇಂದ್ರಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ.
  • ಮಧ್ಯವರ್ತಿಗಳ  ಮೇಲೆ ಅವಲಂಬನೆ ಆಗುವುದು ತಪ್ಪುತ್ತದೆ

ಸರ್ಕಾರವೇ ನೀಡಿರುವ ಅಧಿಕೃತ ಆಪ್ ಮೂಲಕ ಚೆಕ್ ಮಾಡಿದರೆ ಮಾಹಿತಿ ನಿಖರವಾಗಿರುತ್ತದೆ.


ಗೃಹಲಕ್ಷ್ಮಿ ಯೋಜನೆ ಹಣ ಸ್ಟೇಟಸ್ ಚೆಕ್ ಮಾಡಲು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಆಪ್:

> DBT Karnataka App (ಡಿಬಿಟಿ ಕರ್ನಾಟಕ ಆಪ್)

> ಗಮನಿಸಿ:
ಪ್ಲೇ ಸ್ಟೋರ್‌ನಲ್ಲಿ ಬೇರೆ ಹೆಸರುಗಳ ಆಪ್‌ಗಳು ಕಾಣಬಹುದು. ಆದರೆ DBT Karnataka ಎಂಬ ಸರ್ಕಾರದ ಅಧಿಕೃತ ಆಪ್ ಮಾತ್ರ ಬಳಸಬೇಕು.


> ಈಗ ಕೆಳಗೆ ನೀಡಿರುವ ಪ್ರಕ್ರಿಯೆಯನ್ನು ಸರಿಯಾಗಿ ಫಾಲೋ ಮಾಡಿದರೆ, ಯಾರ ಸಹಾಯವೂ ಇಲ್ಲದೇ ನೀವೇ ಹಣದ ಸ್ಟೇಟಸ್ ಚೆಕ್ ಮಾಡಬಹುದು.


Step 1: Google Play Store ಓಪನ್ ಮಾಡಿ.

> ನಿಮ್ಮ ಮೊಬೈಲ್‌ನಲ್ಲಿ Google Play Store ಓಪನ್ ಮಾಡಿ, Search box ನಲ್ಲಿ DBT Karnataka ಎಂದು ಟೈಪ್ ಮಾಡಿ.


Step 2: ಅಧಿಕೃತ ಆಪ್ ಅನ್ನು ಗುರುತಿಸಿ ಇನ್ಸ್ಟಾಲ್ ಮಾಡಿ.

> DBT Karnataka ಎಂದು ಹೆಸರು ಇರುವ ಸರ್ಕಾರಿ ಆಪ್ ಸೆಲೆಕ್ಟ್ ಮಾಡಿ, Install ಬಟನ್ ಮೇಲೆ ಕ್ಲಿಕ್ ಮಾಡಿ, ಆಪ್ ಸಂಪೂರ್ಣವಾಗಿ ಇನ್ಸ್ಟಾಲ್ ಆಗುವವರೆಗೂ ಕಾಯಿರಿ.


Step 3: ಆಪ್ ಓಪನ್ ಮಾಡಿ ಆಧಾರ್ ಸಂಖ್ಯೆ ಎಂಟರ್ ಮಾಡಿ.

> ಆಪ್ ಓಪನ್ ಮಾಡಿದಾಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಲು ಒಂದು ಬಾಕ್ಸ್ ಬರುತ್ತದೆ,  ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿರಿ, Terms & Conditions ಮೇಲೆ ಟಿಕ್ ಮಾಡಿ ನೆಕ್ಸ್ಟ್ ಸ್ಟೆಪ್ ಸಬ್ಮಿಟ್ ಮಾಡಿ.


Step 4: OTP ಮೂಲಕ ಆಧಾರ್ ವೆರಿಫಿಕೇಶನ್.

> Get OTP ಮೇಲೆ ಕ್ಲಿಕ್ ಮಾಡಿ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ OTP ಬರುತ್ತದೆ, OTP ಎಂಟರ್ ಮಾಡಿ Verify OTP ಮೇಲೆ ಕ್ಲಿಕ್ ಮಾಡಿ.

> OTP ಸರಿಯಾಗಿ ವೆರಿಫೈ ಆದ ನಂತರ ನಿಮ್ಮ ಆಧಾರ್‌ನ ಮೂಲ ಮಾಹಿತಿ ಆಪ್‌ನಲ್ಲಿ ತೋರಿಸುತ್ತದೆ.


Step 5: MPIN ಕ್ರಿಯೇಟ್ ಮಾಡುವುದು. 

> ಈಗ ಆಪ್ ಬಳಸಲು ನೀವು ಒಂದು 4-digit MPIN ಕ್ರಿಯೇಟ್ ಮಾಡಬೇಕು.  ಅದಕ್ಕೆ ನೀವು ಒಂದೇ ಪಿನ್ ಅನ್ನು ಎರಡು ಬಾರಿ ಎಂಟರ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.

> ಈ MPIN ಮುಂದಿನ ಬಾರಿ ಲಾಗಿನ್ ಮಾಡಲು ಉಪಯೋಗವಾಗುತ್ತದೆ.


Step 6: Login ಮಾಡಿ Payment Status ಆಯ್ಕೆಮಾಡಿ.

> ನಿಮ್ಮ ಹೆಸರು ಕಾಣಿಸುತ್ತದೆ ಅದನ್ನು ಸೆಲೆಕ್ಟ್ ಮಾಡಿ MPIN ಹಾಕಿ Login ಮಾಡಿ. ಲಾಗಿನ್ ಆದ ನಂತರ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ:

  • Payment Status
  • Seeding Status
  • Aadhaar Linked Bank Account
  • Profile & Contact

> ಇಲ್ಲಿ Payment Status ಮೇಲೆ ಕ್ಲಿಕ್ ಮಾಡಿ.


Step 7: ಗೃಹಲಕ್ಷ್ಮಿ ಯೋಜನೆ ಆಯ್ಕೆ ಮಾಡಿ.

> Payment Status ಕ್ಲಿಕ್ ಮಾಡಿದಾಗ ಸರ್ಕಾರದ ವಿವಿಧ ಯೋಜನೆಗಳ ಪಟ್ಟಿ ಬರುತ್ತದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಆಯ್ಕೆಮಾಡಿ.


Step 8: ಹಣ ಜಮಾ ಆಗಿರುವ ಸಂಪೂರ್ಣ ಮಾಹಿತಿ ನೋಡಿ.

> ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿದ ತಕ್ಷಣ:

  • ಯಾವ ದಿನ ಹಣ ಜಮಾ ಆಗಿದೆ
  • ಎಷ್ಟು ಹಣ ಜಮಾ ಆಗಿದೆ
  • ಇತ್ತೀಚಿನ ಪಾವತಿ ವಿವರ

ಈ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ನೋಡಬಹುದು.


> ಹಣ ಇನ್ನೂ ಜಮಾ ಆಗಿಲ್ಲ ಅಂದ್ರೆ ತಕ್ಷಣ ಗಾಬರಿಯಾಗಬೇಡಿ. ಕೆಳಗಿನ ಅಂಶಗಳನ್ನು ಚೆಕ್ ಮಾಡಿ:

  • ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ?
  • DBT ಸೀಡಿಂಗ್ ಸರಿಯಾಗಿದೆಯೇ?
  • ಬ್ಯಾಂಕ್ ಖಾತೆ ಆಕ್ಟಿವ್ ಇದೆಯೇ?
  • KYC ಪೂರ್ಣಗೊಂಡಿದೆಯೇ?

> ಈ ಎಲ್ಲವೂ ಸರಿಯಾಗಿದ್ದರೆ ಹಣ ಮುಂದಿನ ಹಂತದಲ್ಲಿ ಜಮಾ ಆಗುವ ಸಾಧ್ಯತೆ ಇದೆ.


  • ಮನೆಬಾಗಿಲಲ್ಲೇ ಎಲ್ಲಾ ಸಬ್ಸಿಡಿ ಸ್ಟೇಟಸ್ ಚೆಕ್ ಮಾಡಬಹುದು.
  • ಬ್ಯಾಂಕ್‌ಗೆ ಹೋಗುವ ಅಗತ್ಯ ಇರುವುದಿಲ್ಲ.
  • ಸರ್ಕಾರಿ ಮಾಹಿತಿಯ ನಿಖರತೆ  ಇರುತ್ತದೆ.
  • ಸಮಯ ಮತ್ತು ಹಣ  ಉಳಿತಾಯವಾಗುತ್ತದೆ.

> ಇದು ಸಂಪೂರ್ಣವಾಗಿ ಸರ್ಕಾರದ ಅಧಿಕೃತ ಡಿಜಿಟಲ್ ಸೇವೆ.


> ಗೃಹಲಕ್ಷ್ಮಿ ಯೋಜನೆ ರಾಜ್ಯದ ಮಹಿಳೆಯರಿಗೆ ಸರ್ಕಾರ ನೀಡುತ್ತಿರುವ ದೊಡ್ಡ ಆರ್ಥಿಕ ಬೆಂಬಲವಾಗಿದೆ. ಹಣ ಜಮಾ ಆಗುವ ಪ್ರಕ್ರಿಯೆ ಹಂತ ಹಂತವಾಗಿ ನಡೆಯುವುದರಿಂದ ಕೆಲವರಿಗೆ ತಡವಾಗಬಹುದು. ಆದರೆ ಕಾರದ ಅಧಿಕೃತ ಆಪ್ ಆಗಿರುವ DBT Karnataka ಆಪ್ ಮೂಲಕ ನೀವು ಯಾವಾಗ ಬೇಕಾದರೂ ನಿಮ್ಮ ಹಣದ ಸ್ಟೇಟಸ್ ಚೆಕ್ ಮಾಡಬಹುದು.

Leave a Comment