RRB Recruitment 2026: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳ ಭರ್ತಿಗೆ ಅಧಿಸೂಚನೆ – ಪದವೀಧರರಿಗೆ ಉತ್ತಮ ಅವಕಾಶ.

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ರೈಲ್ವೆ ನೇಮಕಾತಿ ಮಂಡಳಿ (RRB) 2026ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ಐಸೊಲೇಟೆಡ್ ವರ್ಗದ ಅಡಿಯಲ್ಲಿ ಒಟ್ಟು 312 ಖಾಲಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಜೂನಿಯರ್ ಹಿಂದಿ ಅನುವಾದಕ, ಮುಖ್ಯ ಕಾನೂನು ಸಹಾಯಕ ಸೇರಿದಂತೆ ಹಲವು ಪ್ರಮುಖ ಹುದ್ದೆಗಳು ಈ ನೇಮಕಾತಿಯಲ್ಲಿ ಸೇರಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 31ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸರ್ಕಾರಿ ವಲಯದಲ್ಲಿ ಸ್ಥಿರ ಹಾಗೂ ಗೌರವಾನ್ವಿತ ಉದ್ಯೋಗವನ್ನು ಹುಡುಕುತ್ತಿರುವ ಪದವೀಧರರಿಗೆ ಈ ನೇಮಕಾತಿ ಒಂದು ಉತ್ತಮ ಅವಕಾಶವಾಗಿದೆ.


RRB ಪ್ರಕಟಿಸಿರುವ ಮಾಹಿತಿಯಂತೆ, ಈ ನೇಮಕಾತಿಯಲ್ಲಿ ಅತಿ ಹೆಚ್ಚು ಹುದ್ದೆಗಳು ಜೂನಿಯರ್ ಹಿಂದಿ ಅನುವಾದಕ ಹುದ್ದೆಗೆ ಮೀಸಲಾಗಿವೆ. ಒಟ್ಟು 202 ಹುದ್ದೆಗಳು ಈ ವರ್ಗದಲ್ಲಿ ಲಭ್ಯವಿವೆ. ಇದಲ್ಲದೆ,

  • ಮುಖ್ಯ ಕಾನೂನು ಸಹಾಯಕ: 22 ಹುದ್ದೆಗಳು
  • ಸಾರ್ವಜನಿಕ ಅಭಿಯೋಜಕರು: 7 ಹುದ್ದೆಗಳು
  • ಸೀನಿಯರ್ ಪಬ್ಲಿಕ್ ಇನ್ಸ್‌ಪೆಕ್ಟರ್: 15 ಹುದ್ದೆಗಳು
  • ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕರು: 24 ಹುದ್ದೆಗಳು

> ತಾಂತ್ರಿಕ ಮತ್ತು ವೈಜ್ಞಾನಿಕ ವಿಭಾಗದಲ್ಲೂ ನೇಮಕಾತಿ ನಡೆಯುತ್ತಿದ್ದು,

  • ವೈಜ್ಞಾನಿಕ ಸಹಾಯಕ (ತರಬೇತಿ): 2 ಹುದ್ದೆಗಳು
  • ಲ್ಯಾಬ್ ಅಸಿಸ್ಟೆಂಟ್ ಗ್ರೇಡ್–3 (ರಸಾಯನಶಾಸ್ತ್ರ / ಲೋಹಶಾಸ್ತ್ರ): 39 ಹುದ್ದೆಗಳು
  • ವೈಜ್ಞಾನಿಕ ಮೇಲ್ವಿಚಾರಕರು: 1 ಹುದ್ದೆ ಲಭ್ಯವಿದೆ.

ಪ್ರತಿ ಹುದ್ದೆಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
> ಜೂನಿಯರ್ ಹಿಂದಿ ಅನುವಾದಕ ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಪದವಿ ಕಡ್ಡಾಯವಾಗಿದೆ.
> ಮುಖ್ಯ ಕಾನೂನು ಸಹಾಯಕ ಹಾಗೂ ಸಾರ್ವಜನಿಕ ಅಭಿಯೋಜಕ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಅಗತ್ಯವಿದೆ.
> ತಾಂತ್ರಿಕ ಹಾಗೂ ವೈಜ್ಞಾನಿಕ ಹುದ್ದೆಗಳಿಗೆ ವಿಜ್ಞಾನದಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿರಬೇಕು.

ವಯೋಮಿತಿಯ ವಿಷಯದಲ್ಲಿ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು. ಹುದ್ದೆ ಅನುಗುಣವಾಗಿ ಗರಿಷ್ಠ ವಯೋಮಿತಿ 30 ರಿಂದ 40 ವರ್ಷಗಳವರೆಗೆ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿರುತ್ತದೆ.


ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆ ಅನುಗುಣವಾಗಿ ಆಕರ್ಷಕ ವೇತನ ಪ್ಯಾಕೇಜ್ ಒದಗಿಸಲಾಗುತ್ತದೆ. ಕೆಲವು ಹುದ್ದೆಗಳಿಗೆ ತಿಂಗಳಿಗೆ ರೂ. 35,400 ಮೂಲ ವೇತನ ನಿಗದಿಯಾಗಿದ್ದು, ಮುಖ್ಯ ಕಾನೂನು ಸಹಾಯಕ ಸೇರಿದಂತೆ ಹಿರಿಯ ಹುದ್ದೆಗಳಿಗೆ ರೂ. 44,900 ವರೆಗೆ ವೇತನ ದೊರೆಯುತ್ತದೆ. ಇದಲ್ಲದೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಪ್ರಯಾಣ ಭತ್ಯೆ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳೂ ಲಭ್ಯವಿರುತ್ತವೆ.


  • ಸಾಮಾನ್ಯ, ಒಬಿಸಿ(OBC)  ಮತ್ತು ಇಡಬ್ಲ್ಯೂಎಸ್(EWS) ಅಭ್ಯರ್ಥಿಗಳು: ರೂ. 500 ಇರುತ್ತದೆ.
  • ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು: ರೂ. 250 ಇರುತ್ತದೆ.

> ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು.


> ರೈಲ್ವೆ ಕ್ಷೇತ್ರದಲ್ಲಿ ಭದ್ರ ಉದ್ಯೋಗವನ್ನು ಪಡೆಯಲು ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ರೈಲ್ವೆ ನೇಮಕಾತಿ ಮಂಡಳಿ ಸೂಚಿಸಿದೆ.

Leave a Comment